120Log inSign up
by Ranjitha Mಬದುಕು ಬಯಲಾಯ್ತು
Details

ಬದುಕು ಬಯಲಾಯ್ತು

ಬಯಲಾಯ್ತು ಬದುಕು

ವಾಂಛೆಗಳೊಡನೆ ಸೇರಿ

ಕನಸುಗಳ ಸ್ನೇಹ ಮಾಡಿ

ಬದುಕು ಬದಲಾಯ್ತು


ಬಣ್ಣನೆಗೆ ಸಿಗದಂತೆ 

ಭವಿಷ್ಯತ್ತಿನ ಅಂದಾಜಿರದೆ

ವರ್ತಮಾನದ ಹಂಗಿರದೆ

ಭೂತದ ಗುಂಗಿರದೆ

ವಜಾ ಮಾಡುತ ಕಹಿ ನೆನಪುಗಳ

ಬದುಕು ಬಯಲಾಯ್ತು


ವಂದಿಸುತ ನಿಂದಕರಿಗೆ

ಸಂದಿಸುತ ನಿರ್ಜರರ

ವಂಚಕರ ಲೆಕ್ಕಿಸದೆ 

ಸಟೆಯಲ್ಲಿ ನೃತವ ಅರಸುತ

ವರ್ಜಿಸುತ ನೆರವೇರದ ಸ್ವಪ್ನಗಳ

ಬದುಕು ಬದಲಾಯ್ತು


ಬೇತಾಳದಂತೆ ಕುಣಿವಾಗ 

ಬಣ್ಣದ ಮುಖವಾಡ ಕಳಚಿ

ಬೊಗಳೆ ಮಾತು ಲೊಟ್ಟೆಯಾಗಿ

ಬೆಸ್ತು ಬಿದ್ದ ತರುವಾಯ

ಬೆಳ್ಳಗಿರುವುದೆಲ್ಲ ಹಾಲಲ್ಲವೆಂದು

ಬದುಕು ಬದಲಾಯ್ತು


ಬದುಕು ಬದಲಾಗಿ 

ಬಯಲೆ ಬದುಕಾಗಿ

ಬದಲಾದ ಬದುಕು ಕೇಳಿತು

ನನ್ನಲೊಂದು ಒಲವು ಅಂಕುರಿಸಲಿಲ್ಲವೇಕೆ…??

ಬಯಲಾದ ಬದುಕು ಹೇಳಿತು

ಚಿಗುರಲು ನನ್ನೆದೆ ಬರಡಾಗಿದೆ.


Loading comments…