ಆಲಯದ ಎದುರಿನಲ್ಲಿ ಸಾಲು ಸಾಲು ದೀಪ
ಮನದಾಳದಿಂದ ಭಕ್ತಿಯ ದೇವರ ಜಪ ತಪ
ನವ ಉಡುಪನ್ನು ತೊಟ್ಟು ಮನೆಯೆಲ್ಲಾ ಸುತ್ತಿ
ಹಚ್ಚುತ್ತಿದ್ದೆವು ಆನೆ ಪಟಾಕಿಯ ಬತ್ತಿ
ಅಪ್ಪ ತಂದ ಪಟಾಕಿಯ ಹೊಡೆಯುವುದೇ ಚಂದ
ಮಳೆ ನೆಲಚಕ್ರ ನಕ್ಷತ್ರ ಕಡ್ಡಿಯು ಉರಿಯುವ ಅಂದ
ದೀಪದಿಂದ ಕಂಗೊಳಿಸುವ ಶೃಂಗಾರದ ತುಳಸಿ ಅಂಗಳ
ಕಣ್ತುಂಬವ ಈ ವಿಸ್ಮಯವೇ ಮನೆ ಮನಕ್ಕೆ ಮಂಗಳ
ಗೋವಿಂದ ಗೋವಿಂದ ನಾಮ ಭಜನೆ ಹಾಡಿ
ಗೋಪಾಲ ಗೋಪಾಲ ನಾಮ ಭಜನೆ ಪಾಡಿ
ಮಹಾಲಕ್ಷ್ಮಿಯ ಲೀಲೆಯ ಮನಸಾರೆ ಕೊಂಡಾಡಿ
ಹಬ್ಬವ ಆಚರಿಸಿ ಮನೆಮಂದಿಯೆಲ್ಲಾ ಜೊತೆಗೂಡಿ
Loading comments…