ದೂರ ಹೋಗಬೇಕಿದೆ ಎನಗೆ
ಯಾರ ಸಂಗವೂ ಇಲ್ಲದ ಕಡೆಗೆ
ಭಾರ ಆಗೇನು ಯಾರಿಗೂ ಕೊನೆಗೆ
ಮರ, ಗಿಡಗಳಂತೆ ಸಹಾಯ ನೀಡಿ ಒಂದಿಬ್ಬರಿಗೆ
ಕರ ಮುಗಿವೆ ಬೇಡಿ ನಿನಗೆ
ಕರುಣಿಸೈ ಮೋಕ್ಷವ ನನಗೆ
ವರ ಇದೊಂದೇ ಸಾಕು ಜೀವಕೆ
ದೂರ ಬರುವೆ ನಿನ್ನೆಡೆ, ದಿಗಂತಕೆ
ಅವರಿವರ ಸಿಂಪತಿಯ ಭಾರವೇಕೆ
ನನ್ನಿಂದಾಗದಿರೆ, ಈ ಅಸ್ತಿತ್ವವೇಕೆ?
ನರನಿದ್ದ ಕಡೆ ಬೆಳೆಯದೂ ಗರಿಕೆ
ಕಾರಣ ಹೇಳು, ಇಲ್ಲಿ ನಾನೇಕೆ?
ದೂರ ಹೋಗಬೇಕಿದೆ ಎನಗೆ
ಯಾರ ಸಂಗವೂ ಇಲ್ಲದ ಕಡೆಗೆ
Loading comments…