120Log inSign up
by Vijaya Bharathiಕನ್ನಡ ತರಂಗಿಣಿ
Details


ಕರುನಾಡ ಕಲ್ಯಾಣಿ

ಕನ್ನಡದ ವಾಣಿ

ಜನಪದ ವಿಹಾರಿಣಿ

ಸುಮಧುರ ಭಾಷಿಣಿ


ಗದ್ಯ ಪದ್ಯ ಚಂಪೂ

ತ್ರಿಪದಿ ಚೌಪದಿ ಕಂದ

ಷಟ್ಪದಿ ಅಕ್ಕರಗಳಾ

ಸಾಂಗತ್ಯಚಾರಿಣಿ


ಖ್ಯಾತ ಕರ್ಣಾಟಕಗಳಾ

ಛಂದೋ ವಿಹಾರಿಣಿ

ನವರಸಾಲಂಕಾರ

ಶಬ್ದಾರ್ಥ ಶೋಭಿಣಿ


ಪಂಪ ರನ್ನ ಕವಿವರರಾ

ಮಾರ್ಗಕಾವ್ಯಭೋದಿನಿ

ಕುಮಾರವ್ಯಾಸ ಲಕುಮೀಶ

ರಾಘವರ ಷಟ್ಪದಿ ವಿಲಾಸಿನಿ


ಹರಿದಾಸ ಪಂಥಗಳಾ

ಹರಿಭಕ್ತಿ ವಾಹಿನಿ

ವಚನ ವರೇಣ್ಯರಾ

ಅನುಭಾವಿಕ ವಾಣಿ


ನವ ಅರುಣೋದಯದಾ

ನವ ಭಾವ ತರಿಂಗಿಣಿ

ನವ್ಯಾತಿನವ್ಯಗಳಾ

ಪ್ರಗತಿಪಥ ಚಾರಿಣಿ


ದೇಸಿ ಮಾರ್ಗಗಳಾ

ಜಾನಪದ ಸಂಚಾರಿಣಿ

ಕರುನಾಡ ಗೀರ್ವಾಣಿ

ಓ ಕನ್ನಡ ತರಂಗಿಣಿ


ಜಯತು ಕನ್ನಡ ವಾಣಿ

ಕರುನಾಡ ಕಲ್ಯಾಣಿ

ಜಯತು ಜಯ ಗೀರ್ವಾಣಿ

ಜಯ ಕನ್ನಡ ತರಂಗಿಣಿ

                   


Loading comments…